ನವರಾತ್ರಿಯ ಮೊದಲ ದಿನದಿಂದ ‘ಏಕತಾ ಪ್ರತಿಮೆ’ ಸಾರ್ವಜನಿಕ ಪ್ರವೇಶಕ್ಕೆ ಮುಕ್ತ


Source : PTI

ಅಹಮದಾಬಾದ್: ಆರು ತಿಂಗಳಿಗಿಂತ ಹೆಚ್ಚು ವಿರಾಮದ ನಂತರ ವಿಶ್ವದ ಅತಿ ಎತ್ತರದ ಪ್ರತಿಮೆ ಗುಜರಾತಿನ “ಏಕತಾ ಪ್ರತಿಮೆ”ಅಕ್ಟೋಬರ್ 17 ರಿಂದ ಸಾರ್ವಜನಿಕರಿಗೆ  ಮುಕ್ತವಾಗಲಿದೆ. ನವರಾತ್ರಿ ಪ್ರಾರಂಭದ ಶುಭದಿನದಂದು ಏಕತಾ ಪ್ರತಿಮೆಗೆ ಮತ್ತೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. 

ದೇಶದ ಪ್ರಮುಖ ಪ್ರವಾಸಿ ಆಕರ್ಷಣೆಯಾದ ಏಕತಾ ಪ್ರತಿಮೆ  ಮತ್ತೆ ತೆರೆಯುವ ನಿರ್ಧಾರದ ಭಾಗವಾಗಿ, ಸರ್ದಾರ್ ಸರೋವರ್ ನರ್ಮದಾ ನಿಗಮ್ ಲಿಮಿಟೆಡ್ (ಎಸ್‌ಎಸ್‌ಎನ್‌ಎನ್‌ಎಲ್) ಈ ಪ್ರಕಟಣೆ ಹೊರಡಿಸಿದೆ. ಅಧಿಕಾರಿಗಳು ಈಗಾಗಲೇ ಕೆವಾಡಿಯಾ ತಾಣದಲ್ಲಿ ಜಂಗಲ್ ಸಫಾರಿ, ಮಕ್ಕಳಉದ್ಯಾನ, ಏಕತಾ ಮಾಲ್ ಮತ್ತು ಇತರ ಪ್ರವಾಸಿ ಆಕರ್ಷಣೆ ತಾಣವನ್ನು ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿಸಿದ್ದಾರೆ. ಅಲ್ಲದೆ ಇಲ್ಲಿಗೆ ಬರುವ ಪ್ರವಾಸಿಗರಿಂಡ ರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳನ್ನು ಅನುಸರಿಸಲುಒಂದಿ ದಿನಕ್ಕೆ ಗರಿಷ್ಠ 2,500 ಪ್ರವಾಸಿಗರಿಗೆ ಮಾತ್ರ ಪ್ರತಿಮೆ ವೀಕ್ಷಣೆಗೆ ಅವಕಾಶ ಒದಗಿಸಲಾಗುತ್ತಿದೆ. ಅದರಲ್ಲಿಯೂ ಒಮ್ಮೆಗೆ ಕೇವಲ 500 ಮಂದಿಗೆ ಮಾತ್ರ  193 ಮೀಟರ್ ಎತ್ತರದಲ್ಲಿರುವ ವೀಕ್ಷಣಾ ಗ್ಯಾಲರಿಗೆ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ.

ಅಧಿಕೃತ ಟಿಕೆಟಿಂಗ್ ವೆಬ್‌ಸೈಟ್ www.soutickets.in ನಿಂದ ಎರಡು ಗಂಟೆಗಳ ಸ್ಲಾಟ್‌ಗಳಲ್ಲಿ ಟಿಕೆಟ್‌ ಗಳನ್ನು ಬುಕ್ ಮಾಡಬಹುದಾಗಿದೆ. ಇದರ ಹೊರತಾಗಿ ಪ್ರವಾಸಿ ತಾಣದಲ್ಲಿ ಇರುವ ಟಿಕೆಟ್ ಕೌಂಟ್ಅರ್ ಗಳಲ್ಲಿ ಯಾವ  ಟಿಕೆಟ್ ಗಳನ್ನು ನೀಡಲಾಗುವುದಿಲ್ಲ. ಮಾಸ್ಕ್  ಧರಿಸುವುದು, ಕೈ ನೈರ್ಮಲ್ಯ ಮತ್ತು ದೈಹಿಕ ದೂರವನ್ನು ಕಾಪಾಡಿಕೊಳ್ಳುವುದು ಮುಂತಾದ ಎಲ್ಲಾ ಮೂಲ ಕೋವಿಡ್ ಪ್ರೋಟೋಕಾಲ್‌ಗಳನ್ನು ಸಂದರ್ಶಕರು ಅನುಸರಿಸುವುದು ಕಡ್ಡಾಯವಾಗಿದೆ. 

ರಾಷ್ಟ್ರೀಯ ಏಕತೆ ದಿನಾಚರಣೆಯಾದ  ಅಕ್ಟೋಬರ್ 31 ರಂದು ಪ್ರಧಾನಿ ನರೇಂದ್ರ ಮೋದಿ ಈ ಸ್ಥಳಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ,Source link

Related Articles

Ind vs Eng: India vs England: इंग्लंडविरुद्ध भारतीय संघ किती सामने खेळणार, जाणून घ्या फक्त एका क्लिकवर… – india vs england: india will play...

कोलकाता, India vs England : ऑस्ट्रेलियाच्या दौऱ्यानंतर इंग्लंडचा संघ भारतामध्ये येणार आहे. या दौऱ्यात नेमके किती सामने खेळवले जाणार, हे बीसीसीआयचे अध्यक्ष सौरव...

LEAVE A REPLY

Please enter your comment!
Please enter your name here

Stay Connected

20,764FansLike
2,453FollowersFollow
16,800SubscribersSubscribe
- Advertisement -

Latest Articles

Ind vs Eng: India vs England: इंग्लंडविरुद्ध भारतीय संघ किती सामने खेळणार, जाणून घ्या फक्त एका क्लिकवर… – india vs england: india will play...

कोलकाता, India vs England : ऑस्ट्रेलियाच्या दौऱ्यानंतर इंग्लंडचा संघ भारतामध्ये येणार आहे. या दौऱ्यात नेमके किती सामने खेळवले जाणार, हे बीसीसीआयचे अध्यक्ष सौरव...