ಐಸಿಯು ಉಪಕರಣ, ಪಿಪಿಇ ಕಿಟ್, ಎನ್-95 ಮಾಸ್ಕ್ ಖರೀದಿ ಸೇರಿ 4008.50 ಕೋಟಿ ರೂ. ಪೂರಕ ಅಂದಾಜು ಮಂಡನೆ

Source : UNI

ಬೆಂಗಳೂರು: ಮಹಾಮಾರಿ ಕೋವಿಡ್ ಸೋಂಕು ನಿಯಂತ್ರಣ ಸಂಬಂಧ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗೆ ಐಸಿಯು ಉಪಕರಣ, ಎನ್-೯೫, ಪಿಪಿಇ ಕಿಟ್ ಖರೀದಿಗೆ ಒಟ್ಟು ೧,೦೯೦.೬೧ ಕೋಟಿ ರೂ. ಹೆಚ್ಚುವರಿಯಾಗಿ ಒದಗಿಸುವುದು ಸೇರಿ ಒಟ್ಟು ೪೦೦೮.೫೦ ಕೋಟಿ ರೂಪಾಯಿಯನ್ನು ೨೦೨೦-೨೧ನೇ ಸಾಲಿನ ಪೂರಕ ಅಂದಾಜಿನಲ್ಲಿ (ಮೊದಲನೆ ಕಂತು)ಒದಗಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನ ಸಭೆಯಲ್ಲಿ ೨೦೨೦-೨೧ನೇ ಸಾಲಿನ ಪೂರಕ ಅಂದಾಜುಗಳ ಮೊದಲನೇ ಕಂತಿನ ಬೇಡಿಕೆಗಳನ್ನು ಮಂಡಿಸಿದರು.

ಪೂರಕ ಅಂದಾಜುಗಳಲ್ಲಿನ ಒಟ್ಟು ೪೦೦೮. ೫೦ ಕೋಟಿ ರು.ಗಳ ಪೈಕಿ ೨೭೮.೫೮ ಕೋಟಿ ರು.ಪ್ರಭೃತ ವೆಚ್ಚ ಮತ್ತು ೩,೭೨೯.೯೨ ಕೋಟಿ ರು. ಪರಿಷ್ಕತ ವೆಚ್ಚ ಸೇರಿದೆ.ಸಂಚಿತ ನಿಧಿಯಿಂದ ಹೊರ ಹೋಗುವ ನಿವ್ವಳ ಮೊತ್ತ ೩,೯೭೧.೫೮ ಕೋಟಿ ರು.ಗಳಾಗಿದೆ.ಇದರಲ್ಲಿ ೪೯೭.೮೭ ಕೋಟಿ ರು.ಕೇಂದ್ರ ಸಹಾಯಕ್ಕೆ ಸಂಬಂಧಪಟ್ಟಿವೆ ಎಂದು ಉಲ್ಲೇಖಿಸಲಾಗಿದೆ.  

ಕೋವಿಡ್ ಪ್ರಕರಣಕ್ಕೆ ಉಪಕರಣ,ಔಷಧಿ,ಕಿಟ್‌ಗಳು,ವೆಂಟಿಲೇಟರ್ ಖರೀದಿಗೆ ಆರೋಗ್ಯ ಇಲಾಖೆಗೆ ೧,೦೯೦.೬೧ ಕೋಟಿ ರೂ.,ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಯ ವಿವಿಧ ವೈದ್ಯಕೀಯ ಸಂಸ್ಥೆಗಳಿಗೆ ಐಸಿಯು ಉಪಕರಣ, ಎನ್-೯೫ ಮಾಸ್ಕ್,ಪಿಪಿಇ ಕಿಟ್ ಖರೀದಿಗೆ ೧೩೬.೧೬ ಕೋಟಿ ರೂ. ನೀಡಲಾಗಿದೆ.

ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಶಿಕ್ಷಣ ಸಂಸ್ಥೆಯಡಿ ಬರುವ ಬ್ರಾಡ್ ವೇ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ವಹಣೆಗೆ ತಾತ್ಕಾಲಿಕವಾಗಿ ಸೃಜಿಸಿರುವ ಹುದ್ದೆಗಳಿಗೆ ವೇತನ ಪಾವತಿಗೆ ೨.೩೮ ಕೋಟಿ ರೂ.ಹಾಗೂ ಕೋವಿಡ್ ನಿರ್ವಹಣೆಗೆ ಆರೋಗ್ಯ ಇಲಾಖೆ ಗುತ್ತಿಗೆ, ಹೊರ ಗುತ್ತಿಗೆ ವೈದ್ಯಾಧಿಕಾರಿಗಳಿಗೆ ವೇತನ ನೀಡಲು ೧೨.೯೦ ಕೋಟಿ ರೂ.ಗಳನ್ನು ಒದಗಿಸಲಾಗಿದೆ.Source link

Related Articles

மருத்துவமனையில் சிகிச்சை பெற்றுவந்த நிலையில் நடிகர் தவசி உயிரிழந்தார்

நடிகர் தவசி புற்றுநோயால் பாதிக்கப்பட்டு மதுரை மருத்துவமனையில் சிகிச்சை பெற்று வந்த நிலையில்,  இன்று சிகிச்சை பலனின்றி காலமானார். Source link

David Warner: डेव्हिड वॉर्नर बनला अमिताभ बच्चन, चाहत्यांनी व्हिडीओ केला व्हायरल… – australia’s cricketer david warner turned into amitabh bachchan and video turned into...

नवी दिल्ली : ऑस्ट्रेलियाचा धडाकेबाज सलामीवीर डेव्हिड वॉर्नर हा मजेशीर व्हिडीओ बनवत असतो. वॉर्नरने आता एक व्हिडीओ बनवला आहे. या व्हिडीओमध्ये तो बॉलीवूडमधील...

LEAVE A REPLY

Please enter your comment!
Please enter your name here

Stay Connected

20,764FansLike
2,445FollowersFollow
16,800SubscribersSubscribe
- Advertisement -

Latest Articles

மருத்துவமனையில் சிகிச்சை பெற்றுவந்த நிலையில் நடிகர் தவசி உயிரிழந்தார்

நடிகர் தவசி புற்றுநோயால் பாதிக்கப்பட்டு மதுரை மருத்துவமனையில் சிகிச்சை பெற்று வந்த நிலையில்,  இன்று சிகிச்சை பலனின்றி காலமானார். Source link

David Warner: डेव्हिड वॉर्नर बनला अमिताभ बच्चन, चाहत्यांनी व्हिडीओ केला व्हायरल… – australia’s cricketer david warner turned into amitabh bachchan and video turned into...

नवी दिल्ली : ऑस्ट्रेलियाचा धडाकेबाज सलामीवीर डेव्हिड वॉर्नर हा मजेशीर व्हिडीओ बनवत असतो. वॉर्नरने आता एक व्हिडीओ बनवला आहे. या व्हिडीओमध्ये तो बॉलीवूडमधील...

Sussanne Khan Is An “Island Woman” In This Surprising Percent

<!-- -->Sussanne Khan shared this photo. (Image courtesy: suzkr)HighlightsOn Monday, Sussanne posted a stunning picture of herself She can be seen wearing a...